Saturday, November 22, 2008

ವೀರ್ಯ ಹೆಚ್ಚಿಸುವ ಗರಿಕೆ...!

ಗರಿಕೆ ಯಾರಿಗೂ ಗೊತ್ತಿಲ್ಲ ಎನ್ನುವ ಹಾಗಿಲ್ಲ. ಅಂದರೆ ಗರಿಕೆಯ ಪರಿಚಯ ಇಲ್ಲದವರಿಲ್ಲ. ಗರಿಕೆಯ ಲಕ್ಷಣವೇ ಹಾಗೆ. ಒಮ್ಮೆ ಒಂದೆಡೆ ಬೆಳೆಸಿದರೆ ಊರೆಲ್ಲ ತುಂಬಿಕೊಳ್ಳುತ್ತದೆ. ಅದೇ ಇದರ ವಿಶೇಷ ಗುಣ. ಸಾಮನ್ಯವಾಗಿ ಗರಿಕೆ ಗಣೇಶನಿಗೆ ಶ್ರೇಷ್ಠ ಎಂಬ ವಾಡಿಕೆ ಇದೆ. ಅದೇ ರೀತಿ ಗಣೇಶನ ಅಲಂಕಾರಕ್ಕೆ ಜಾಸ್ತಿಯಾಗಿ ಬಳಸುತ್ತೇವೆ. ಗರಿಕೆಯ ಮತ್ತೊಂದು ವಿಶೇಷವೆಂದರೆ ಇದೊಂದು ದಿವ್ಯ ಔಷಧ. ನಾಟಿ ವೈದ್ಯ ಹೆಚ್ಚಿನ ರೋಗಕ್ಕೆ ಗರಿಕೆ ರಸದ ಸೇವನೆಗೆ ಸಲಹೆ ಮಾಡುತ್ತಾನೆ. ಕಾರಣ ಮಲಬದ್ದತೆಗೆ ಗರಿಕೆ ಕಷಾಯ ಪೇಟೆಂಟ್ ಔಷಧ. ಹೆಚ್ಹಿನ ರೋಗ ಮಲಭಾದ್ದತೆಯಿಂದಲೇ ಬರುವ ಕಾರಣ ಇದನ್ನೇ ಸಲಹೆ ಮಾಡಲಾಗುತ್ತದೆ.

* ಬೇರು ಸಹಿತ ಗರಿಕೆಯನ್ನು ಮಂದ ಬೆಂಕಿಯಲ್ಲಿ ಸ್ವಲ್ಪ ಕಾಯಿಸಿ ಅದರ ರಸ ತೆಗೆದು ಅದಕ್ಕೆ ಬೆಲ್ಲ ಮತ್ತು ಹಾಲನ್ನು ಸ್ವಲ್ಪ ಪ್ರಮಾಣದಲ್ಲಿ ಬೆರೆಸಿ ಬೆಳಿಗ್ಗೆ ಸೇವನೆ ಮಾಡುವುದರಿಂದ ವೀರ್ಯ ಜಾಸ್ತಿಯಾಗುತ್ತದೆ.

* ಕೆಲವೊಮ್ಮೆ ಮೂಗಿನಲ್ಲಿ ರಕ್ತ ಬಂದರೆ ಗರಿಕೆಯ ರಸತೆಗೆದು ನಾಲ್ಕು ಡ್ರಾಪ್ ಹಾಕಿದರೆ ರಕ್ತ ಸುರಿಯುವಿಕೆ ನಿಲ್ಲುತ್ತದೆ.

Tuesday, October 21, 2008

ಕಾಮಾಲೆ ಕಮರಿಸೋ "ಅರಿಸಿನಸಾಸಿವೆ"!

ಸಾಸಿವೆ ಕೇಳಿದ್ದಿರಬಹುದು...ಅಗಾಗ ಅಡಿಗೆ ಮನೆಗೆ ಹೋಗಿದ್ದಿದ್ದರೆ ಗೊತ್ತಿರಲೇ ಬೇಕು. ಆದರೆ ಅರಿಶಿನ ಸಾಸಿವೆ ಬಗ್ಗೆ ಕೇಳಿರಲಿಕ್ಕಿಲ್ಲ. ಅದು ಅಡುಗೆ ಮನೆಯಲ್ಲಿ ಇರುವುದು ಭಾರಿ ಅಪರೂಪ. ಒಂದೊಮ್ಮೆ ಇದೆ ಎಂದಾದರೂ ಅದರ ಪರಿಚಯ ಎಲ್ಲರಿಗೂ ಗೊತ್ತಿರುವುದಿಲ್ಲ. ಇದು ಅಡುಗೆಗೆ ಬಳಸುವ ಸಂಭಾರವಸ್ತುವಂತು ಅಲ್ಲ. ಹಳ್ಳಿ ವೈದ್ಯ ತನ್ನಲ್ಲಿಗೆ ಬಂದವರಿಗೆ ನೀಡೊ ಔಷಧ. ಹಳ್ಳಿಮಂದಿ ಕಾಮಾಲೆ ಕಾಣಿಸಿತೆಂದರೆ ಮೊದಲು ಇದಕ್ಕಾಗಿಯೇ ಹುಡುಕಾಡುತ್ತಾರೆ. ಕಾರಣ ಮತ್ತೇನು ಇಲ್ಲ. ನಿಜಕ್ಕೂ ಇದು ಪವರ್ ಫುಲ್ ಔಷಧ. ಅದರಲ್ಲೂ ಆಗಾಗ ಸೇವಿಸುತ್ತಿದ್ದರೆ ಇಫೆಕ್ಟಿವ್. ಅರಿಶಿನ ಸಾಸಿವೆ ಅರ್ಥಾತ್, 'ಪೌದೆಮುಳ್ಳು'. ಕೆಲವೊಮ್ಮೆ ಹೀಗೂ ಆಗುವುದುಂಟು. ಹಾವೂ ಅಥವಾ ಇನ್ನಾವುದೂ ವಿಷಜಂತು ಕಡಿದಾಗ ಈ ಗಿಡದ ಬಳಕೆ ಮಾಡಿರುತ್ತೇವೆ. ಆದರೆ ಇದೇ ಅರಿಶಿನ ಸಾಸಿವೆ ಎಂದು ಗೊತ್ತಿರುವುದಿಲ್ಲ. ಹೌದು. ಈ ಗಿಡದ ಎಲೆಗಳನ್ನು ವಿಷಜಂತು ಕಡಿದ ಜಾಗದ ಮೇಲೆ ಹಾಕಿಟ್ಟರೆ ವಿಷ ದೇಹಕ್ಕೆ ಪಸರಿಸದಂತೆ ನೋಡಿಕೊಳ್ಳುತ್ತದೆ. ಅದೇ ಇದರ ಸ್ಪೆಷಲ್. ಇಸ್ಟೇ ಅಲ್ಲ... ಈ ಅರಿಶಿನ ಸಾಸಿವೆಯ ಎಲೆಗಳನ್ನು ಅರೆದು ಚೂರ್ಣ ಮಾಡಿ ತಿನ್ನಿಸುತ್ತಾರೆ. ಗಯವದಲ್ಲಿ ಲೇಪಿಸಲಾಗುತ್ತದೆ. ಇಸ್ಟೆಲ್ಲಾ ಮಾಡಿದಾಗಲೂ ವಿಷದ ಅಂಶ ಹೆಚ್ಚಲು ಸಾದ್ಯವೇ ಇಲ್ಲ. ಅದರಲ್ಲೂ ಎಲೆಯ ಚೂರ್ಣ ಸೇವನೆ ಕಾಮಾಲೆರೋಗಕ್ಕೆ ಉತ್ತಮ ಔಷಧ. ಇನ್ನು ಇದರ ಹೂವಿನ ಮೊಗ್ಗು ಅರೆದು ಸೇವನೆ ಮಾಡಿದರೆ ವಾತ ಶಮನ ಗ್ಯಾರಂಟಿ. ಅಂದಾಜು ಹದಿನೈದರಿಂದ ಇಪ್ಪತ್ತು ಅಡಿ ಎತ್ತರಕ್ಕೆ ಬೆಳೆಯುವ ಅರಿಶಿನ ಸಾಸಿವೆ ಗಿಡವನ್ನು ನದಿತೀರ ಮತ್ತು ತೇವಭರಿತ ಪ್ರದೇಶಗಳಲ್ಲಿ ಕಾಣಲು ಸಾದ್ಯ. ಗಿಡದ ಎಲ್ಲ ಭಾಗಗಳ ಮೇಲೆ ರೋಮ ಇರುತ್ತದೆ. ಚಿಕ್ಕ ಚಿಕ್ಕ ಹೂವು, ಕಂದು ಕಾಯಿ ನೋಡಲು ಸಾದ್ಯ. ಅರಿಶಿನ ಸಾಸಿವೆ ಕಾಯಿ ಮತ್ತು ಹೂವಿನಲ್ಲು ಕಾಮೋದ್ರೇಕ ಗುಣವಿರುತ್ತದೆ. ಆದರೆ ಬಳಕೆಯಲ್ಲಿ ಜಾಗ್ರತೆ ಅಗತ್ಯ. ಮನಸೂ ಇಚ್ಚೆ ಬಳಕೆ ಮಾಡುವಂತಿಲ್ಲ ಹುಷಾರ್....

Monday, October 13, 2008

ಗಿರಿಯ ನೆತ್ತಿಯಮೇಲೆಲ್ಲ... ಉದ್ರೇಕಕಾರಿ ಹೂವುಗಳು....




ಕೆಮ್ಮಣ್ಣಗುಂಡಿ, ಮುಳ್ಳಯ್ಯನಗಿರಿ, ಬಾಬಾಬುಡನಗಿರಿ...ಸುತ್ತಮುತ್ತಲ ಆ ಹಸಿರು ನಿಶಾನೆ ಕೇವಲ ಸೌಂದರ್ಯ ಆಸ್ವಾದನೆಯ ತಾಣವಷ್ಟೇ ಅಲ್ಲ. ನಿಜಕ್ಕೂ ಅದೊಂದು ಔಷಧ ಭಂಡಾರ! ಹೌದು... ಚಿಕ್ಕಮಂಗಳೂರಿನಿಂದ ಅಂದಾಜು ಐವತ್ತು ಕಿಲೋ ಮೀಟರ್ ವ್ಯಾಪ್ತಿಯೊಳಗಿರುವ ಈ ಪ್ರದೇಶಗಳು ನೂರಾರು ಔಷಧೀಯ ಸಸ್ಯಗಳನ್ನು ತನ್ನ ಮಡಿಲಲ್ಲಿ ಇರಿಸಿಕೊಂಡಿದೆ. ಗಿರಿಯ ನೆತ್ತಿಯಲ್ಲಿ ಅರಳಿ ಆಕರ್ಷಿಸುವ ನೂರಾರು ಹೂವುಗಳೂ ಔಷಧೀಯ ಗುಣಗಳನ್ನೇ ಹೊಂದಿವೆ. ಹೊಟ್ಟೆನೋವು, ಮಲಭದ್ದತೆ, ವಾಂತಿ-ಬೇದಿ ಸೇರಿ ಇನ್ನೂ ಕೆಲವು ರೋಗಗಳಿಗೆ ಇದು ಪೇಟೆಂಟ್ ಔಷಧ. ಅದರಲ್ಲೂ ಅದೆಷ್ಟೋ ಹೂವುಗಳು ಉದ್ರೇಕಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಆದರೆ ಬಹುತೇಕ ಮಂದಿಗೆ ಈ ಬಗ್ಗೆ ಗೊತ್ತೇ ಇಲ್ಲ. ಹೀಗಾಗಿಯೇ ಇಂದು ಇಂತ ಔಷಧೀಯ ಸಸ್ಯಗಳು ನಾಪತ್ತೆಯಾಗುತ್ತಿವೆ. ಹತ್ತಾರು ವರ್ಷ ಮೊದಲು ಸಿಕ್ಕಷ್ಟು ಸುಲಭವಾಗಿ ಇಂದು ಸಿಗಲಾರವು. ಆದರು ನಮ್ಮ ಪ್ರವಾಸದಲ್ಲಿ ಒಂದಿಷ್ಟು ಕಣ್ಣಿಗೆ ಬಿದ್ದಿದ್ದಂತು ಹೌದು. ಇಂತದೇ ಹತ್ತಾರು ಔಷಧೀಯ ಹೂವುಗಳು ಕಣ್ಣಿಗೆ ಬಿದ್ದವು. ಕೆಲವು ಸಸ್ಯಗಳು ಆ ಜಾತಿಗೆ ಸೇರಿದವಾಗಿದ್ದವು.

Monday, September 29, 2008

ಸುಖ ಸಂಭೋಗಕ್ಕೆ ದಾಗಡಿ ರಾಮಬಾಣ

ಒಂದಲ್ಲ ಎರಡಲ್ಲ...ಹಲವು ಲೈಂಗಿಕ ಸಮಸ್ಯೆಗಳಿಗೆ ದಾಗಡಿ ಸೂಪರ್ ಔಷಧ. ಆ ಬಗ್ಗೆ ಎರಡು ಮಾತೆ ಇಲ್ಲ. ಆದರೆ ಕಾಡು ಬಿಟ್ಟು ನಾಡು ಸೇರಿದ ಇಂದಿನ ಮಂದಿಗೆ ಇದು ಗೊತ್ತಿಲ್ಲ. ಇಂಗ್ಲಿಷ್ ಔಷಧಕ್ಕೆ ಮಾರು ಹೋಗಿರುವ ಇಂದಿನ ಸಮಾಜಕ್ಕೆ ಹೇಗೆ ತಾನೆ ಗೊತ್ತಿರಲು ಸಾದ್ಯ?.
"ದಾಗಡಿ ಬಳ್ಳಿ ಬಳಸೋದು ದಡ್ಡ ಜನ ಎಂದೇ ಪರಿಗಣಿಸಿ ಬಿಟ್ಟಿರುತ್ತಾರೆ. ಇರಲಿ ಹಾಗಂದುಕೊಂಡರು ಪರವಾಗಿಲ್ಲ. ಅಂದುಕೊಂಡ ಮಾತ್ರಕ್ಕೆ ದಾಗಡಿಯ ವಿಶೇಷತೆಗೇನು ಪೆಟ್ಟು?. ಎಲ್ಲದಕ್ಕೂ ನಂಬಿಕೆ ಬೇಕು" ಹೀಗೆನ್ನುತ್ತಲೆ ಅದೇನೆಲ್ಲ ಸೊಪ್ಪು ಸದೆ ತಂದು ಔಷಧ ಮಾಡಿ ಕೈಗಿಡುತ್ತಿದ್ದ ಮುಳ್ಳೇಮಕ್ಕಿ ಕಾಶಿ ನಾರಾಯಣ ಇಹಲೋಕ ತ್ಯಜಿಸಿ ಆಗಲೇ ಏಳೆಂಟು ವರ್ಷ ಕಳೆದಿದೆ. ಹೀಗಾಗಿ ಮುರೂರಿನ ಹಳೆಮಂದಿ ಈಗಲೂ ಕಾಶಿ ನಾರಾಯಣನನ್ನು ನೆನಪಿಸಿಕೊಳ್ಳುತ್ತಾರೆ.
ದಾಗಡಿಯ ಉಪಯೋಗಗಳು ಹೀಗಿವೆ....
* ದಾಗಡಿ ರಸವನ್ನು ನೀರಿನಲ್ಲಿ ಬೆರೆಸಿದಾಗ ಬರುವ ಲೋಳೆಯ ಸೇವನೆ ಮಾಡುವುದರಿಂದ ಶಿಘ್ರಸ್ಖಲನ ಯಾಗುತ್ತದೆ. ಜತಗೆ ಈ ಲೋಳೆಯ ಸೇವನೆ ಎಡೆಬಿಡದೆ ಬರುವ ಕೆಮ್ಮನ್ನು ಕಡಿಮೆ ಮಾಡುವಲ್ಲಿ ಸಹಕಾರಿ.
* ದಾಗಡಿ ಬೇರಿನ ರಸ ಮತ್ತು ಸ್ವಲ್ಪ ಸಕ್ಕರೆ ನೀರು ಬಳಕೆಯಿಂದ ಸ್ವಪ್ನಸ್ಖಲನ ಕೂಡ ನಿವಾರಣೆ ಆಗುತ್ತದೆ.
* ದಾಗಡಿಯ ಚೂರ್ಣ ಸೇವನೆ ಮಾಡುವುದರಿಂದ ಶಕ್ತಿ ವರ್ಧನೆಯಾಗುತ್ತದೆ. ಸಾಮನ್ಯವಾಗಿ ಹಾವು ಕಡಿದಾಗಳೂ ಈ ಚೂರ್ಣ ಉತ್ತಮ ಔಷಧ.
* ದಾಗಡಿ ಬೇರಿನ ಕಷಾಯಕ್ಕೆ ಕಾಳು ಮೆಣಸು ಹಾಕಿ ಮೇಕೆ ಹಾಲಿನಲ್ಲಿ ಬೆರೆಸಿ ಸೇವಿಸುವುದರಿಂದ ಸಂಧಿ ವಾತ ಸೇರಿದಂತೆ ಕೆಲವು ಲೈಂಗಿಕ ಸಮಸ್ಯೆ ನಿವಾರಣೆಯಾಗುವುದು. ಪ್ರತಿದಿನ ಬೆಳಿಗ್ಗೆ ಸೇವನೆ ಮಾಡುವುದು ಕಡ್ಡಾಯ.
* ದಾಗಡಿ ಬೇರು ಮತ್ತು ಎಲೆಯ ಚೂರ್ಣ ಸೇವನೆ ಮಾಡುವುದರಿಂದ ದಮ್ಮು-ಕೆಮ್ಮು ನಿವಾರಣೆ ಆಗುತ್ತದೆ. ಜ್ವರ ಬಂದರೂ ಕಡಿಮೆಯಾಗುತ್ತದೆ. ಬೇರು ಮತ್ತು ಎಲೆ ಸೇರಿಸಿ ಅರೆದು ಮೈ-ಕೈಗೆ ಹಚ್ಚುವುದರಿಂದ ಚರ್ಮ ರೋಗ ಕಡಿಮೆಯಾಗುತ್ತದೆ.
* ದಾಗಡಿಸೊಪ್ಪನ್ನು ದನಕರುಗಳಿಗೂ ಬಳಸಲಾಗುತ್ತದೆ.

Friday, September 26, 2008

ಕಾಮೋದ್ರೇಕ ನುಗ್ಗೆ " ದೇಶೀ ವಯಾಗ್ರ"

ನುಗ್ಗೆಸೊಪ್ಪು ಯಾರಿಗೂ ಗೊತ್ತಿಲ್ಲ ಎನ್ನುವಂತಿಲ್ಲ. ಆದರೆ ಬಹುತೇಕ ಮಂದಿಗೆ ಔಷಧಕ್ಕೆ ಬರುತ್ತೆ ಎಂದೇ ಗೊತ್ತಿಲ್ಲ.
ಹೌದು...ಇದೊಂದು ಅದ್ಭುತ ಔಷಧ ಸಸ್ಯ. ಮನೆಯಲ್ಲಿ ನುಗ್ಗೆಸೊಪ್ಪು ಇದೆ ಎಂದರೆ ಹಿರಿಯರು ಸಣ್ಣಪುಟ್ಟ ರೋಗಕ್ಕೆಲ್ಲ ಹೆದರುವುದಿಲ್ಲ. ಸಾಮನ್ಯವಾಗಿ ಹಳ್ಳಿಗಳಲ್ಲಿ ಪ್ರತಿಯೊಬ್ಬರ ಮನೆಗಳಲ್ಲೂ ಇದ್ದೇ ಇರುತ್ತದೆ. ನುಗ್ಗೆ ಮರವೊಂದಿದ್ದರೆ ಬೇರೆ ತರಕಾರಿಯು ಬೇಕಾಗಿಲ್ಲ. ನುಗ್ಗೆಕಾಯಿ ಸಾಂಬಾರ ಸಖತ್ ಫೇಮಸ್ಸು. ರುಚಿ ಕೂಡ ಹೌದು. ಹೆಚ್ಚುಕಡಿಮೆ ಇಪ್ಪತ್ತು ಅಡಿ ಎತ್ತರಕ್ಕೆ ಬೆಳೆಯುವ ನುಗ್ಗೆ ಮರ ಫೆಬ್ರವರಿ-ಏಪ್ರಿಲ್ ತಿಂಗಳಲ್ಲಿ ಹೂವು ಬಿಡುತ್ತವೆ. ಹೂವು ಬಿಟ್ಟಾಗ ಎಲೆಗಳೆಲ್ಲ ಉದುರುತ್ತವೆ. ಹಾಗೆ ಕಾಯಿಗಳು ಬಿಡುತ್ತವೆ. ನುಗ್ಗೆ ಕಾಯಿ ಅಂದಾಜು ಒಂದರಿಂದ ಎರಡು ಅಡಿ ಉದ್ದವಿರುತ್ತದೆ. ಡೊಳ್ಳು ಭಾರಿಸುವ ಕಡ್ಡಿಯಂತೆ ಇರುತ್ತದೆ. ಅದಕ್ಕಾಗಿಯೇ ಅಂಗ್ಲ ಭಾಷೆಯಲ್ಲಿ "ಡ್ರಂ ಸ್ಟಿಕ್ ಟ್ರಿ" ಎಂದು ಕರೆದಿದ್ದು. ನುಗ್ಗೆ ಹಲವಾರು ರೋಗಗಳಿಗೆ ಒಂದು ಉತ್ತಮ ಔಷಧ.
ಏನಪ್ಪಾ ಔಷಧ ಗುಣ.... ಎಂಬ ಪ್ರಶ್ನೆ ಸಹಜ. ಆದರೆ ಆ ಬಗ್ಗೆ ಕೇಳಿದರೆ ನಿಬ್ಬೆರಗಾಗುವಿರಿ. ಅದರ ಔಷಧೀಯ ಗುಣಗಳ ಬಗ್ಗೆ ಇಲ್ಲಿ ಪಟ್ಟಿಮಾಡಲಾಗಿದೆ.

* ನುಗ್ಗೆ ಹೂವನ್ನು ಕಾದಿರುವ ಹಾಲಿಗೆ ಹಾಕಿ ಆರಿದ ಬಳಿಕ ಹೂ ಸಮೇತ ಕುಡಿಯುವುದರಿಂದ ಪಿತ್ತ ಶಮನ ಆಗುತ್ತದೆ.
* ನುಗ್ಗೆ ಸೊಪ್ಪಿನ ರಸವನ್ನು ಜೇನು ತುಪ್ಪಕ್ಕೆ ಸೇರಿಸಿ ಬೆಳಿಗ್ಗೆ ಮತ್ತು ಸಂಜೆ ಅರ್ಧ ಚಮಚ ಕುಡಿಯುವುದರಿಂದ ಹೊಟ್ಟೆನೋವು ಕಡಿಮೆಯಾಗುತ್ತದೆ.
* ನುಗ್ಗೆ ಸೊಪ್ಪನ್ನು ಎದೆಹಾಲಿನಲ್ಲಿ ಅರೆದು ಹಣೆಗೆ ಲೇಪಿಸುವುದರಿಂದ ತಲೆನೋವು ಕಡಿಮೆಯಾಗುತ್ತದೆ.
* ನುಗ್ಗೆ ಮರದ ಗೋಂದು ಮತ್ತು ನುಗ್ಗೆ ಬೀಜಗಳನ್ನು ಒಣಗಿಸಿ ಪುಡಿಮಾಡಿ ಪ್ರತಿದಿನ ರಾತ್ರಿ ಹಾಲಿಗೆ ಬೆರೆಸಿ ಕುಡಿಯುವುದರಿಂದ ಧಾತು ಕಟ್ಟಿಕೊಳ್ಳುತ್ತದೆ. ಇದರಿಂದ ಸಂಬೋಗಕ್ಕೆ ಸಹಕಾರಿ.
* ನುಗ್ಗೆ ಚಕ್ಕೆಯನ್ನು ತೆನೆ ಇಲ್ಲದ ಹಾಲಿನಲ್ಲಿ ತೇಯ್ದು ಮೂರು ದಿನ ಕುಡಿದರೆ ಮಕ್ಕಳಲ್ಲಿ ಕಾಡುವ ಕೆಮ್ಮು ಶಮನಗೊಳ್ಳುವುದು.
ಇಂಥ ಔಷಧೀಯ ಗುಣ ಇರುವ ನುಗ್ಗೆ ಸೊಪ್ಪಿನ ವೈಜ್ಞಾನಿಕ ಹೆಸರು ಮೊರಿಂಗ್ ಒಲಿಫೆರ್ (Moringa oleifera lamk). ಇದು ಮೊರಿಂಗೆಸಿ ಕುಟುಂಬಕ್ಕೆ ಸೇರಿದ್ದು. ಇದಕ್ಕೆ ನುಗ್ಗೆಮರ, ಮೋಚಕ ಮರ ಎಂದೂ ಕರೆಯುತ್ತಾರೆ.