Friday, September 26, 2008

ಕಾಮೋದ್ರೇಕ ನುಗ್ಗೆ " ದೇಶೀ ವಯಾಗ್ರ"

ನುಗ್ಗೆಸೊಪ್ಪು ಯಾರಿಗೂ ಗೊತ್ತಿಲ್ಲ ಎನ್ನುವಂತಿಲ್ಲ. ಆದರೆ ಬಹುತೇಕ ಮಂದಿಗೆ ಔಷಧಕ್ಕೆ ಬರುತ್ತೆ ಎಂದೇ ಗೊತ್ತಿಲ್ಲ.
ಹೌದು...ಇದೊಂದು ಅದ್ಭುತ ಔಷಧ ಸಸ್ಯ. ಮನೆಯಲ್ಲಿ ನುಗ್ಗೆಸೊಪ್ಪು ಇದೆ ಎಂದರೆ ಹಿರಿಯರು ಸಣ್ಣಪುಟ್ಟ ರೋಗಕ್ಕೆಲ್ಲ ಹೆದರುವುದಿಲ್ಲ. ಸಾಮನ್ಯವಾಗಿ ಹಳ್ಳಿಗಳಲ್ಲಿ ಪ್ರತಿಯೊಬ್ಬರ ಮನೆಗಳಲ್ಲೂ ಇದ್ದೇ ಇರುತ್ತದೆ. ನುಗ್ಗೆ ಮರವೊಂದಿದ್ದರೆ ಬೇರೆ ತರಕಾರಿಯು ಬೇಕಾಗಿಲ್ಲ. ನುಗ್ಗೆಕಾಯಿ ಸಾಂಬಾರ ಸಖತ್ ಫೇಮಸ್ಸು. ರುಚಿ ಕೂಡ ಹೌದು. ಹೆಚ್ಚುಕಡಿಮೆ ಇಪ್ಪತ್ತು ಅಡಿ ಎತ್ತರಕ್ಕೆ ಬೆಳೆಯುವ ನುಗ್ಗೆ ಮರ ಫೆಬ್ರವರಿ-ಏಪ್ರಿಲ್ ತಿಂಗಳಲ್ಲಿ ಹೂವು ಬಿಡುತ್ತವೆ. ಹೂವು ಬಿಟ್ಟಾಗ ಎಲೆಗಳೆಲ್ಲ ಉದುರುತ್ತವೆ. ಹಾಗೆ ಕಾಯಿಗಳು ಬಿಡುತ್ತವೆ. ನುಗ್ಗೆ ಕಾಯಿ ಅಂದಾಜು ಒಂದರಿಂದ ಎರಡು ಅಡಿ ಉದ್ದವಿರುತ್ತದೆ. ಡೊಳ್ಳು ಭಾರಿಸುವ ಕಡ್ಡಿಯಂತೆ ಇರುತ್ತದೆ. ಅದಕ್ಕಾಗಿಯೇ ಅಂಗ್ಲ ಭಾಷೆಯಲ್ಲಿ "ಡ್ರಂ ಸ್ಟಿಕ್ ಟ್ರಿ" ಎಂದು ಕರೆದಿದ್ದು. ನುಗ್ಗೆ ಹಲವಾರು ರೋಗಗಳಿಗೆ ಒಂದು ಉತ್ತಮ ಔಷಧ.
ಏನಪ್ಪಾ ಔಷಧ ಗುಣ.... ಎಂಬ ಪ್ರಶ್ನೆ ಸಹಜ. ಆದರೆ ಆ ಬಗ್ಗೆ ಕೇಳಿದರೆ ನಿಬ್ಬೆರಗಾಗುವಿರಿ. ಅದರ ಔಷಧೀಯ ಗುಣಗಳ ಬಗ್ಗೆ ಇಲ್ಲಿ ಪಟ್ಟಿಮಾಡಲಾಗಿದೆ.

* ನುಗ್ಗೆ ಹೂವನ್ನು ಕಾದಿರುವ ಹಾಲಿಗೆ ಹಾಕಿ ಆರಿದ ಬಳಿಕ ಹೂ ಸಮೇತ ಕುಡಿಯುವುದರಿಂದ ಪಿತ್ತ ಶಮನ ಆಗುತ್ತದೆ.
* ನುಗ್ಗೆ ಸೊಪ್ಪಿನ ರಸವನ್ನು ಜೇನು ತುಪ್ಪಕ್ಕೆ ಸೇರಿಸಿ ಬೆಳಿಗ್ಗೆ ಮತ್ತು ಸಂಜೆ ಅರ್ಧ ಚಮಚ ಕುಡಿಯುವುದರಿಂದ ಹೊಟ್ಟೆನೋವು ಕಡಿಮೆಯಾಗುತ್ತದೆ.
* ನುಗ್ಗೆ ಸೊಪ್ಪನ್ನು ಎದೆಹಾಲಿನಲ್ಲಿ ಅರೆದು ಹಣೆಗೆ ಲೇಪಿಸುವುದರಿಂದ ತಲೆನೋವು ಕಡಿಮೆಯಾಗುತ್ತದೆ.
* ನುಗ್ಗೆ ಮರದ ಗೋಂದು ಮತ್ತು ನುಗ್ಗೆ ಬೀಜಗಳನ್ನು ಒಣಗಿಸಿ ಪುಡಿಮಾಡಿ ಪ್ರತಿದಿನ ರಾತ್ರಿ ಹಾಲಿಗೆ ಬೆರೆಸಿ ಕುಡಿಯುವುದರಿಂದ ಧಾತು ಕಟ್ಟಿಕೊಳ್ಳುತ್ತದೆ. ಇದರಿಂದ ಸಂಬೋಗಕ್ಕೆ ಸಹಕಾರಿ.
* ನುಗ್ಗೆ ಚಕ್ಕೆಯನ್ನು ತೆನೆ ಇಲ್ಲದ ಹಾಲಿನಲ್ಲಿ ತೇಯ್ದು ಮೂರು ದಿನ ಕುಡಿದರೆ ಮಕ್ಕಳಲ್ಲಿ ಕಾಡುವ ಕೆಮ್ಮು ಶಮನಗೊಳ್ಳುವುದು.
ಇಂಥ ಔಷಧೀಯ ಗುಣ ಇರುವ ನುಗ್ಗೆ ಸೊಪ್ಪಿನ ವೈಜ್ಞಾನಿಕ ಹೆಸರು ಮೊರಿಂಗ್ ಒಲಿಫೆರ್ (Moringa oleifera lamk). ಇದು ಮೊರಿಂಗೆಸಿ ಕುಟುಂಬಕ್ಕೆ ಸೇರಿದ್ದು. ಇದಕ್ಕೆ ನುಗ್ಗೆಮರ, ಮೋಚಕ ಮರ ಎಂದೂ ಕರೆಯುತ್ತಾರೆ.

No comments: