Monday, September 29, 2008

ಸುಖ ಸಂಭೋಗಕ್ಕೆ ದಾಗಡಿ ರಾಮಬಾಣ

ಒಂದಲ್ಲ ಎರಡಲ್ಲ...ಹಲವು ಲೈಂಗಿಕ ಸಮಸ್ಯೆಗಳಿಗೆ ದಾಗಡಿ ಸೂಪರ್ ಔಷಧ. ಆ ಬಗ್ಗೆ ಎರಡು ಮಾತೆ ಇಲ್ಲ. ಆದರೆ ಕಾಡು ಬಿಟ್ಟು ನಾಡು ಸೇರಿದ ಇಂದಿನ ಮಂದಿಗೆ ಇದು ಗೊತ್ತಿಲ್ಲ. ಇಂಗ್ಲಿಷ್ ಔಷಧಕ್ಕೆ ಮಾರು ಹೋಗಿರುವ ಇಂದಿನ ಸಮಾಜಕ್ಕೆ ಹೇಗೆ ತಾನೆ ಗೊತ್ತಿರಲು ಸಾದ್ಯ?.
"ದಾಗಡಿ ಬಳ್ಳಿ ಬಳಸೋದು ದಡ್ಡ ಜನ ಎಂದೇ ಪರಿಗಣಿಸಿ ಬಿಟ್ಟಿರುತ್ತಾರೆ. ಇರಲಿ ಹಾಗಂದುಕೊಂಡರು ಪರವಾಗಿಲ್ಲ. ಅಂದುಕೊಂಡ ಮಾತ್ರಕ್ಕೆ ದಾಗಡಿಯ ವಿಶೇಷತೆಗೇನು ಪೆಟ್ಟು?. ಎಲ್ಲದಕ್ಕೂ ನಂಬಿಕೆ ಬೇಕು" ಹೀಗೆನ್ನುತ್ತಲೆ ಅದೇನೆಲ್ಲ ಸೊಪ್ಪು ಸದೆ ತಂದು ಔಷಧ ಮಾಡಿ ಕೈಗಿಡುತ್ತಿದ್ದ ಮುಳ್ಳೇಮಕ್ಕಿ ಕಾಶಿ ನಾರಾಯಣ ಇಹಲೋಕ ತ್ಯಜಿಸಿ ಆಗಲೇ ಏಳೆಂಟು ವರ್ಷ ಕಳೆದಿದೆ. ಹೀಗಾಗಿ ಮುರೂರಿನ ಹಳೆಮಂದಿ ಈಗಲೂ ಕಾಶಿ ನಾರಾಯಣನನ್ನು ನೆನಪಿಸಿಕೊಳ್ಳುತ್ತಾರೆ.
ದಾಗಡಿಯ ಉಪಯೋಗಗಳು ಹೀಗಿವೆ....
* ದಾಗಡಿ ರಸವನ್ನು ನೀರಿನಲ್ಲಿ ಬೆರೆಸಿದಾಗ ಬರುವ ಲೋಳೆಯ ಸೇವನೆ ಮಾಡುವುದರಿಂದ ಶಿಘ್ರಸ್ಖಲನ ಯಾಗುತ್ತದೆ. ಜತಗೆ ಈ ಲೋಳೆಯ ಸೇವನೆ ಎಡೆಬಿಡದೆ ಬರುವ ಕೆಮ್ಮನ್ನು ಕಡಿಮೆ ಮಾಡುವಲ್ಲಿ ಸಹಕಾರಿ.
* ದಾಗಡಿ ಬೇರಿನ ರಸ ಮತ್ತು ಸ್ವಲ್ಪ ಸಕ್ಕರೆ ನೀರು ಬಳಕೆಯಿಂದ ಸ್ವಪ್ನಸ್ಖಲನ ಕೂಡ ನಿವಾರಣೆ ಆಗುತ್ತದೆ.
* ದಾಗಡಿಯ ಚೂರ್ಣ ಸೇವನೆ ಮಾಡುವುದರಿಂದ ಶಕ್ತಿ ವರ್ಧನೆಯಾಗುತ್ತದೆ. ಸಾಮನ್ಯವಾಗಿ ಹಾವು ಕಡಿದಾಗಳೂ ಈ ಚೂರ್ಣ ಉತ್ತಮ ಔಷಧ.
* ದಾಗಡಿ ಬೇರಿನ ಕಷಾಯಕ್ಕೆ ಕಾಳು ಮೆಣಸು ಹಾಕಿ ಮೇಕೆ ಹಾಲಿನಲ್ಲಿ ಬೆರೆಸಿ ಸೇವಿಸುವುದರಿಂದ ಸಂಧಿ ವಾತ ಸೇರಿದಂತೆ ಕೆಲವು ಲೈಂಗಿಕ ಸಮಸ್ಯೆ ನಿವಾರಣೆಯಾಗುವುದು. ಪ್ರತಿದಿನ ಬೆಳಿಗ್ಗೆ ಸೇವನೆ ಮಾಡುವುದು ಕಡ್ಡಾಯ.
* ದಾಗಡಿ ಬೇರು ಮತ್ತು ಎಲೆಯ ಚೂರ್ಣ ಸೇವನೆ ಮಾಡುವುದರಿಂದ ದಮ್ಮು-ಕೆಮ್ಮು ನಿವಾರಣೆ ಆಗುತ್ತದೆ. ಜ್ವರ ಬಂದರೂ ಕಡಿಮೆಯಾಗುತ್ತದೆ. ಬೇರು ಮತ್ತು ಎಲೆ ಸೇರಿಸಿ ಅರೆದು ಮೈ-ಕೈಗೆ ಹಚ್ಚುವುದರಿಂದ ಚರ್ಮ ರೋಗ ಕಡಿಮೆಯಾಗುತ್ತದೆ.
* ದಾಗಡಿಸೊಪ್ಪನ್ನು ದನಕರುಗಳಿಗೂ ಬಳಸಲಾಗುತ್ತದೆ.

No comments: