Tuesday, October 21, 2008

ಕಾಮಾಲೆ ಕಮರಿಸೋ "ಅರಿಸಿನಸಾಸಿವೆ"!

ಸಾಸಿವೆ ಕೇಳಿದ್ದಿರಬಹುದು...ಅಗಾಗ ಅಡಿಗೆ ಮನೆಗೆ ಹೋಗಿದ್ದಿದ್ದರೆ ಗೊತ್ತಿರಲೇ ಬೇಕು. ಆದರೆ ಅರಿಶಿನ ಸಾಸಿವೆ ಬಗ್ಗೆ ಕೇಳಿರಲಿಕ್ಕಿಲ್ಲ. ಅದು ಅಡುಗೆ ಮನೆಯಲ್ಲಿ ಇರುವುದು ಭಾರಿ ಅಪರೂಪ. ಒಂದೊಮ್ಮೆ ಇದೆ ಎಂದಾದರೂ ಅದರ ಪರಿಚಯ ಎಲ್ಲರಿಗೂ ಗೊತ್ತಿರುವುದಿಲ್ಲ. ಇದು ಅಡುಗೆಗೆ ಬಳಸುವ ಸಂಭಾರವಸ್ತುವಂತು ಅಲ್ಲ. ಹಳ್ಳಿ ವೈದ್ಯ ತನ್ನಲ್ಲಿಗೆ ಬಂದವರಿಗೆ ನೀಡೊ ಔಷಧ. ಹಳ್ಳಿಮಂದಿ ಕಾಮಾಲೆ ಕಾಣಿಸಿತೆಂದರೆ ಮೊದಲು ಇದಕ್ಕಾಗಿಯೇ ಹುಡುಕಾಡುತ್ತಾರೆ. ಕಾರಣ ಮತ್ತೇನು ಇಲ್ಲ. ನಿಜಕ್ಕೂ ಇದು ಪವರ್ ಫುಲ್ ಔಷಧ. ಅದರಲ್ಲೂ ಆಗಾಗ ಸೇವಿಸುತ್ತಿದ್ದರೆ ಇಫೆಕ್ಟಿವ್. ಅರಿಶಿನ ಸಾಸಿವೆ ಅರ್ಥಾತ್, 'ಪೌದೆಮುಳ್ಳು'. ಕೆಲವೊಮ್ಮೆ ಹೀಗೂ ಆಗುವುದುಂಟು. ಹಾವೂ ಅಥವಾ ಇನ್ನಾವುದೂ ವಿಷಜಂತು ಕಡಿದಾಗ ಈ ಗಿಡದ ಬಳಕೆ ಮಾಡಿರುತ್ತೇವೆ. ಆದರೆ ಇದೇ ಅರಿಶಿನ ಸಾಸಿವೆ ಎಂದು ಗೊತ್ತಿರುವುದಿಲ್ಲ. ಹೌದು. ಈ ಗಿಡದ ಎಲೆಗಳನ್ನು ವಿಷಜಂತು ಕಡಿದ ಜಾಗದ ಮೇಲೆ ಹಾಕಿಟ್ಟರೆ ವಿಷ ದೇಹಕ್ಕೆ ಪಸರಿಸದಂತೆ ನೋಡಿಕೊಳ್ಳುತ್ತದೆ. ಅದೇ ಇದರ ಸ್ಪೆಷಲ್. ಇಸ್ಟೇ ಅಲ್ಲ... ಈ ಅರಿಶಿನ ಸಾಸಿವೆಯ ಎಲೆಗಳನ್ನು ಅರೆದು ಚೂರ್ಣ ಮಾಡಿ ತಿನ್ನಿಸುತ್ತಾರೆ. ಗಯವದಲ್ಲಿ ಲೇಪಿಸಲಾಗುತ್ತದೆ. ಇಸ್ಟೆಲ್ಲಾ ಮಾಡಿದಾಗಲೂ ವಿಷದ ಅಂಶ ಹೆಚ್ಚಲು ಸಾದ್ಯವೇ ಇಲ್ಲ. ಅದರಲ್ಲೂ ಎಲೆಯ ಚೂರ್ಣ ಸೇವನೆ ಕಾಮಾಲೆರೋಗಕ್ಕೆ ಉತ್ತಮ ಔಷಧ. ಇನ್ನು ಇದರ ಹೂವಿನ ಮೊಗ್ಗು ಅರೆದು ಸೇವನೆ ಮಾಡಿದರೆ ವಾತ ಶಮನ ಗ್ಯಾರಂಟಿ. ಅಂದಾಜು ಹದಿನೈದರಿಂದ ಇಪ್ಪತ್ತು ಅಡಿ ಎತ್ತರಕ್ಕೆ ಬೆಳೆಯುವ ಅರಿಶಿನ ಸಾಸಿವೆ ಗಿಡವನ್ನು ನದಿತೀರ ಮತ್ತು ತೇವಭರಿತ ಪ್ರದೇಶಗಳಲ್ಲಿ ಕಾಣಲು ಸಾದ್ಯ. ಗಿಡದ ಎಲ್ಲ ಭಾಗಗಳ ಮೇಲೆ ರೋಮ ಇರುತ್ತದೆ. ಚಿಕ್ಕ ಚಿಕ್ಕ ಹೂವು, ಕಂದು ಕಾಯಿ ನೋಡಲು ಸಾದ್ಯ. ಅರಿಶಿನ ಸಾಸಿವೆ ಕಾಯಿ ಮತ್ತು ಹೂವಿನಲ್ಲು ಕಾಮೋದ್ರೇಕ ಗುಣವಿರುತ್ತದೆ. ಆದರೆ ಬಳಕೆಯಲ್ಲಿ ಜಾಗ್ರತೆ ಅಗತ್ಯ. ಮನಸೂ ಇಚ್ಚೆ ಬಳಕೆ ಮಾಡುವಂತಿಲ್ಲ ಹುಷಾರ್....

No comments: